RSS ದ್ವಿಮುಖ ಹೇಳಿಕೆ ಉತ್ತರ ಭಾರತದಲ್ಲಿ ಸಮರ್ಥನೆ ದಕ್ಷಿಣದಲ್ಲಿ ವಿರೋಧ..!
ಶಿವಮೊಗ್ಗ,ನವದೆಹಲಿ: ನಿನ್ನೆ ಶಿವಮೊಗ್ಗದ ಖಾಸಗೀ ಹೊಟೇಲ್‌ನಲ್ಲಿ ಆರ್.ಎಸ್.ಎಸ್ ಕರ್ನಾಟಕ ದಕ್ಷಣ ಪ್ರಾಂತ ಪ್ರಚಾರ ಪ್ರಮುಖರಾದ ರಾಜೇಶ್ ಪದ್ಮಾರ್ ಪತ್ರಕರ್ಯರೊಂದಿಗೆ ಅನೌಪಚಾರಿಕ ಸಂವಾದ ಕಾರ್ಯಕ್ರಮವನ್ನು ನಡೆಸಿದರು ಈ ವೇಳೆ ಮಾತನಾಡಿದ ಆರ್.ಎಸ್.ಎಸ್ ದಕ್ಷಿಣದ ಮುಖಂಡ ರಾಜೇಶ್ ರವರು ವಿರೋಧ ಪಕ್ಷಗಳಾಗಿರುವ ಕಾಂಗ್ರೆಸ್ ಸೇರಿದಂತೆ ಇರೇ ಪಕ್ಷಗಳು ಪ್ರಮುಕವಾಗಿ ಬೇಡಿಕೆ ಇಟ್ಟಿರುವ ಜಾತೀ ಜನಗಣತಿಯ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿ ಜಾತೀ ಜನಣಗತಿಯಂತ ಕಾರ್ಯಕ್ರಮಗಳಿಂದ ಭಾರತದೇಶದ ಏಕತೆ ಹಾಗೂ ಒಗ್ಗಟ್ಟಿಗೆ ಒಡಕು ಬರುವ ಸಾಧ್ಯತೆಗಳೇ ಹೆಚ್ಚು ಎಂಬುವ ರೀತಿಯಲ್ಲಿ ಮಾತನಾಡಿದ್ದರು.
ಇಷ್ಟು ಮಾತ್ರವಲ್ಲದೇ ಜಾತಿ ವರ್ಗಗಳ ಹಿಂದೆ ಬಿದ್ದರೆ ಜನರಲ್ಲಿ ಇನ್ನಡು ಬೇದಮೂಡಬಹುದು ಇಂಥ ಕಾರ್ಯಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದಿಗೂ ಬೆಂಬಲಿಸುವುದಿಲ್ಲಾ ಜಾತಿ ಜನಗಳತಿ ನಡೆಸುವುದು ಸರಿಯಾದ ಕ್ರಮವಾಗಿಲ್ಲಿ ಇಂಥ ಕ್ರಮಗಳಿಗೆ ವಿರೋಧ ಪಕ್ಷಗಳೂ ರಾಜಕೀಯ ಲಾಭಕ್ಕಾಗಿ ಜಾತಿ ಜನಗಣತಿ ಬೇಡಿಕೆಗಳು ಇಡ್ಡುತಿದ್ದು ಇದನ್ನು ಸಂಘಟನೆ ಎಂದಿಗೂ ಬೆಂಗಲಿಸುವುದಿಲ್ಲಾ ಎಂದು ಅನೌಪಚಾರಿಕ ಸಂವಾದದ ಸಮಯದಲ್ಲಿ ರಾಜೇಶ್ ಪದ್ಮಾರ್ ಪತ್ರಕರ್ತರಿಗೆ ಹೇಳಿಕೆಯನ್ನು ನೀಡಿದ್ದರೆ.
ಆದರೆ ಆರ್.ಎಸ್.ಎಸ್ ನ ಉತ್ತರ ಭಾರತದ ಪ್ರಚಾರ ಸಮಿತಿಯ ಪ್ರಮುಖರಾಗಿರುವ ಸುನೀಲ್ ಅಂಬೇಕರ್ ಜನರ ಒಳಿತಿಗಾಗಿ ನಡೆಯಬೇಕೇ ವಿನಃ ಚುನಾವಣಾ ಲಾಭಕ್ಕಾಗಿ ಅಲ್ಲ; ಜಾತಿ ಗಣತಿಗೆ ಆರ್‌ಎಸ್‌ಎಸ್ ಬೆಂಬಲ ಎಂದು ಹೇಳುವ ಮೂಲಕ ಜನರಲ್ಲಿ ಗೊಂದಲ ಮೂಡಿಸಿದ್ದಾರೆ. ಹೌದು ಚುನಾವಣಾ ಲಾಭಕ್ಕಾಗಿ ಜಾತಿ ಗಣತಿಯನ್ನು ಮಾಡಬಾರದು, ಜನರ ಒಳಿತಿಗಾಗಿ ಜಾತಿ ಗಣತಿ ನಡೆಯಬೇಕು ಎನ್ನುವ ಮೂಲಕ ಆರ್‌ಎಸ್‌ಎಸ್ ಜಾತಿ ಗಣತಿಗೆ ಬೆಂಬಲ ಸೂಚಿಸಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಬೇಡ.
ಜನರ ಅಭಿವೃದ್ಧಿಗಾಗಿ ಪ್ರತಿಯೊಂದು ಜಾತಿಯ ಜನರ ಸಂಖ್ಯೆಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಆರ್‌ಎಸ್‌ಎಸ್ ಹೇಳಿದೆ. ಜಾತಿ ಗಣತಿಯು ಜನರ ಕಲ್ಯಾಣದ ಅಗತ್ಯಗಳನ್ನು ಪೂರೈಸಲು ಉಪಯುಕ್ತವಾಗಿದೆ ಎಂದು ಆರ್‌ಎಸ್‌ಎಸ್ ಹೇಳಿದೆ. ಆದರೆ, ಅದನ್ನು ಪ್ರಚಾರ ಮತ್ತು ಚುನಾವಣಾ ಉದ್ದೇಶಗಳಿಗಾಗಿ ಬಳಸದಂತೆ ಎಚ್ಚರಿಕೆ ನೀಡಿದೆ. ರಾಷ್ಟ್ರವ್ಯಾಪಿ ಜಾತಿ ಗಣತಿಗಾಗಿ ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷದ ಪ್ರಚಾರದ ನಡುವೆ ಬಿ.ಜೆ.ಪಿಯ ಸೈದ್ಧಾಂತಿಕ ಪೋಷಕ ಸಂಸ್ಥೆಯಾದ ಆರ್‌ಎಸ್‌ಎಸ್ ಈ ಹೇಳಿಕೆ ನೀಡಿದೆ.
ಜಾತಿ ಗಣತಿಯು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಇದು ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಮುಖ್ಯವಾಗಿದೆ. ಇದನ್ನು ಬಹಳ ಗಂಭೀರವಾಗಿ ವ್ಯವಹರಿಸಬೇಕು. ಕೆಲವೊಮ್ಮೆ, ಸರ್ಕಾರಕ್ಕೆ ಜಾತಿಯ ಜನರ ಸಂಖ್ಯೆಗಳ ಅಗತ್ಯವಿರುತ್ತದೆ ಮತ್ತು ಈ ಹಿಂದೆ ಇದೇ ರೀತಿಯ ಗಣತಿಯನ್ನು ಮಾಡಲಾಗಿದೆ” ಎಂದು ಆರ್‌ಎಸ್‌ಎಸ್ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಕೇರಳದ ಪಾಲಕ್ಕಾಡ್‌ನಲ್ಲಿ ಹೇಳಿದ್ದಾರೆ.
ವರದಿ
ಡಿ.ಪಿ ಅರವಿಂದ್
Comments
Post a Comment