ಚಾಕುವಿನಿಂದ ಹಲ್ಲೆಮಾಡಿದವನಿಗೆ ಜೈಲು ಸಿಕ್ಷೆ ಶಿವಮೊಗ್ಗ ನ್ಯಾಯಾಲಯ ಆದೇಶ
ಶಿವಮೊಗ್ಗ: ಹಣ ಕಾಸಿನ ವ್ಯವಹಾರದ ನೆಪದಲ್ಲಿ ವ್ಯಕ್ತಿ ಒಬ್ಬನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ವ್ಯಕ್ತಿಗೆ ನ್ಯಾಯಾಲದ ಶಿಕ್ಷೆ ವಿದಿಸಿದೆ. ಹಯಾತ್ ಸಾಬ್, 31 ವರ್ಷ, ದಾಸರ ಕಾಲೋನಿ ಶಿರಾಳಕೊಪ್ಪ ಟೌನ್ ಮತ್ತು ಜಿಯಾವುಲ್ಲಾ ಖಾನ್, 24 ವರ್ಷ, ಹಳ್ಳೂರು ಕೇರಿ, ಶಿರಾಳಕೊಪ್ಪ ಟೌನ್ ಇಬ್ಬರಿಗೂ ಈ ಹಿಂದಿನಿಂದಲೂ ಮಾವಿನ ತೋಟದ ಗುತ್ತಿಗೆಯ ವಿಚಾರವಾಗಿ ಹಣ ಕಾಸಿನ ವ್ಯವಹಾರವಿದ್ದು, ಹಯಾತ್ ಸಾಬ್ ನು ಜಿಯಾವುಲ್ಲಾ ಖಾನ್ ನಿಗೆ 25,000/- ರೂ ಹಣ ಕೊಡಲು ಬಾಕಿ ಇರುತ್ತದೆ. ಜಿಯಾವುಲ್ಲಾ ಖಾನ್ ನು ಸದರಿ ಹಣವನ್ನು ಹಿಂದಿರುಗಿಸಲು ಕೇಳಿದಾಗ ದಿನಾಂಕಃ 15-05-2022 ರಂದು ಬೆಳಗ್ಗೆ ಹಯಾತ್ ಸಾಬ್ ನು ಜಿಯಾವುಲ್ಲಾಖಾನ್ ಗೆ ಕರೆ ಮಾಡಿದ.
ಶಿರಾಳಕೊಪ್ಪ ಟೌನ್ ನ ಅಣ್ಣಪ್ಪ ಟಿ ಹೋಟೆಲ್ ಗೆ ಬಾ ಹಣ ಕೊಡುತ್ತೇನೆಂದು ತಿಳಿಸಿದ್ದು, ಜಿಯಾವುಲ್ಲಾಖಾನ್ ನು ಅಲ್ಲಿಗೆ ಹೋದಾಗ ಹಯಾತ್ ಸಾಬ್ ನು ನಿನಗೆ ನಾನು ಯಾವ ಹಣ ಕೊಡಬೇಕು, ಪದೇ ಪದೇ ಕೇಳುತ್ತೀಯ ಎಂದು ಜಗಳ ತೆಗೆದು, ಕೊಲೆ ಮಾಡುವ ಉದ್ದೇಶದಿಂದ ತನ್ನ ಬಳಿ ಇದ್ದ ಚಾಕುವಿನಿಂದ ಜಿಯಾವುಲ್ಲಾಖಾನ್ ನ ಬೆನ್ನಿಗೆ ಹಲ್ಲೆ ಮಾಡಿರುತ್ತಾನೆಂದು ಗಾಯಾಳು ಜಿಯಾವುಲ್ಲಾ ಖಾನ್ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0100/2022 ಕಲಂ 307, 324 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶ್ರೀ ರಮೇಶ್, ಶಿರಾಳಕೊಪ್ಪ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು.
ಆರೋಪಿಯ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಮಂಜುನಾಥ್ ನಾಯಕ್ ರವರು ದಿನಾಂಕಃ 13-09-2024 ರಂದು ಆರೋಪಿತನಾದ ಹಯಾತ್ ಸಾಬ್, 31 ವರ್ಷ, ದಾಸರ ಕಾಲೋನಿ ಶಿರಾಳಕೊಪ್ಪ ಟೌನ್ ಈತನಿಗೆ 01 ವರ್ಷ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿದಿಸಿದ್ದಾರೆ.
ಇಷ್ಟೇ ಅಲ್ಲದೆ ರೂ. 15,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ
ಹೆಚ್ಚುವರಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದು, ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 5,000 ರೂಗಳನ್ನು ಗಾಯಾಳು ಜಿಯಾವುಲ್ಲಾ ಖಾನ್ ರವರಿಗೆ ನೀಡಲು ಆದೇಶಿಸಿರುತ್ತಾರೆ.
ವರದಿ: ಡಿ.ಪಿ ಅರವಿಂದ್
Comments
Post a Comment