ಕೋವಿಡ್ ಹಗರಣ ತನಿಖಾ ವರಿದಿ ಸಿ.ಎಂ ಸಿದ್ದರಾಮಯ್ಯನವರಿಗೆ ಹಸ್ತಾಂತರ.
ಬೆಂಗಳೂರು: ಕೋವಿಡ್ ಸಂದರ್ಬದಲ್ಲಿ ಅದಿಕಾರದಲ್ಲಿದ್ದ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿ.ಜೆ.ಪಿ ಸರ್ಕಾರದ ಸಮಯದಲ್ಲಿ ನಡೆಯಲಾಗಿದೆ ಎನ್ನಲಾಗಿರುವ ಆರೋಗ್ಯ ಸಂಬಂದ ವಸ್ತುಗಳ ಕರಿದಿಯಲ್ಲಿ ಅಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿರುವ ಸುಧಾಕರ್ ರವರ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿದು, ಇದಕ್ಕಾಗಿ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾ ಇವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ತಂಡವು ನಿನ್ನೆ ರಾಜ್ಯ ಮುಖ್ಯಮಂತ್ರಿಗಳಾಗಿರುವ ಸಿ.ಎಂ ಸಿದ್ದರಾಮಯ್ಯನವರನ್ನು ಬೇಟಿ ಮಾಡಿ ನೂರಾರು ಪುಟದ ತನಿಖಾ ವರದಿಯನ್ನು ಹಸ್ತಾಂತರಿಸಿದರು, ಇನ್ನು ಈ ತನಿಖಾವರದಿಯಲ್ಲಿ ಕೊವಿಡ್ ಸಂದರ್ಭದಲ್ಲಿ ಪಿ.ಪಿ.ಐ ಕಿಟ್. ಮಾಸ್ಕ್,ಸೇರಿದಂತೆ ನೂರಾರು ವಸ್ತುಗಳ ಕರೀದಿಯಲ್ಲಿ ಹಗರಣ ನಡೆದಿರುವುದು ಸಾಬೀತಾಗಿದೆ ಎಂದು ಹೇಳಲಾಗಿದ್ದು, ಅಂದಿನ ಆರೋಗ್ಯ ಸಚಿವರಾಗಿರವ ಸುಧಾಕರ್ ರವರ ತಲೆಯಮೇಲೆ ಆರೋಪದ ತೂಗುಗತ್ತಿ ದೂಗಲಿದೆ ಎಂದು ಹೇಳಲಾಗಿದೆ.
ಇನ್ನು ಈ ಸಮಯದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Comments
Post a Comment