ಮಳೆಹಾನಿ ಪ್ರದೇಶಗಳಿಗೆ ಸಚಿವ ಮಧುಬಂಗಾರಪ್ಪ..!
ಶಿವಮೊಗ್ಗ: ಮಲೆನಾಡು ಪ್ರದೇಶವಾಗಿರುವ ಶಿವಮೊಗ್ಗದಲ್ಲಿ ಈ ಬಾರಿ ಸುರಿದ ಅತೀವ ಮಳೆಯಿಂದಾಗಿ ಸೊರಬ ತಾಲ್ಲೂಕಿನ ಗುಡವಿ ಗ್ರಾಮದಿಂದ ಮೂಡದಿವಳಿಗೆ-ಬೆನ್ನೂರನ್ನು ಸಂಪರ್ಕಿಸುವ ಸೇತುವೆ ಪಕ್ಕದ ರಸ್ತೆ, ವರದಾ ನದಿ ಪ್ರವಾಹದಿಂದಾಗಿ ಸಂಪೂರ್ಣ ಹಾಳಾಗಿದ್ದು, ಇಂದು ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಧುಬಂಗಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು,
ಈ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಶೀಘ್ರವೇ ಕಾಮಗಾರಿ ಕೈಗೊಳ್ಳಲು ಸೂಚಿಸಲಾಯಿತು. ಇವರ ಈ ಮಾತಿಗೆ ಸ್ವಂದಿಸಿ ಅಧಿಕಾರಿಗಳು ಅದಷ್ಟು ವೇಗವಾಗಿ ಎಲ್ಲಾ ಕಾಮಗಾರಿಗಳನ್ನ ಪ್ರಾರಂಬ ಮಾಡುವುದರ ಜೊತೆಯಲ್ಲಿ ಸಂಪೂರ್ಣ ಗೊಳಿಸುವುದಾಗಿ ಹೇಳಿದರು.
ಈ ವೇಳೆ ಜನಪ್ರತಿನಿಧಿಗಳು, ಮುಖಂಡರು ಹಾಗೂ PWD ಇಂಜಿನಿಯರ್ ಚಂದ್ರಪ್ಪ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
Comments
Post a Comment