ಭ್ರಷ್ಟ ರಾಜಕಾರಣಿಗಳಿಗೂ ಆರ್‌.ಎಸ್‌.ಎಸ್.‌ ಗೂ ಸಂಪರ್ಕವಿಲ್ಲಾ..! ಆರ್‌.ಎಸ್.ಎಸ್.‌ ಭ್ರಷ್ಟರಿಗೆ ಸಮರ್ತಿಸುವುದಿಲ್ಲಾ ರಾಜೇಶ್ ಪದ್ಮಾರ್‌ ಹೇಳಿಕೆ.

 


ಶಿವಮೊಗ್ಗ: ಇಂದು ಶಿವಮೊಗ್ಗದಲ್ಲಿ ಆರ್‌.ಎಸ್.ಎಸ್‌ ಕರ್ನಾಟಕ  ದಕ್ಷಣ ಪ್ರಾಂತ ಪ್ರಚಾರ ಪ್ರಮುಖರಾದ ರಾಜೇಶ್‌ ಪದ್ಮಾರ್‌ ಪತ್ರಕರ್ಯರೊಂದಿಗೆ ಅನೌಪಚಾರಿಕ ಸಂವಾದ ಕಾರ್ಯಕ್ರಮವನ್ನು ನಡೆಸಿದರು ಈ ಕಾರ್ಯಮದಲ್ಲಿ ಸಂಘದ ಇತರೆ ಪ್ರಮುಖರು ಬಾಗಿಯಾಗಿದ್ದು ಸಂವಾದದ ನೇತೃತ್ವವನ್ನು ರಾಜೇಶ್‌ ಪದ್ಮಾರ್‌ ವಹಿಸಿಕೊಂಡಿದ್ದರು. ಈ ವೇಳೆಯಲ್ಲಿ ಅವರು ಮಾತನಾಡಿ ದೇಶದಲ್ಲಿ ವಿವಿ ಜಾತಿ ವರ್ಗಗಳ ಸಮೂಹ ಬಲಗೊಳ್ಳುತಿರುವುದು ಸರಿಯಲ್ಲ ಈ ಹಿನ್ನೆಲೆ ಭಾರತದ ಸಮಾಜದಲ್ಲಿ ಒಡಕುಗಳನ್ನು ಹೋಗಲಾಡಿಸಿ ಏಲ್ಲಾ ಸಮಾಜಗಳಲ್ಲಿ ಏಕತೆಯನ್ನು ತರುವ ಅಗತ್ಯವಿದೆ. 

ಈ ಹಿನ್ನೆಲೆ ಸಂಘವು ವಿವಿದ ವರ್ಗಗಳ ಕುಟುಂಬಗಳನ್ನು ಒಟ್ಟು ಸೇರಿಸಿ ಹಲವು ಕಾರ್ಯಕ್ರಮಗಳನ್ನು ಡೆಸುವ ಮುಖೇನ ದೇಶದಲ್ಲಿ ಒಗ್ಗಟು ತರುವ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆ ನಡೆಯುತಿರುವ ಪ್ರಮುಖ ಕಾರ್ಯಕ್ರಮಗಳಲ್ಲಿ ಸ್ವದೇಶಿ ವಸ್ತುಗಳ ಬಳಕೆ,ಆಡಳಿತದಲ್ಲಿ ಭ್ರಷ್ಟಾಚಾರ ಅಂತ್ಯಗೊಳಿಸುವುದು, ಸೇರಿದಿಂತೆ ಇತರೆ ಕ್ರಮಗಳ ಕಡೆಗೆ ಸಂಘ ಹೆಚ್ಚು ಗಮನ ಹರಿಸುತ್ತಿದೆ. ಇದು ಸಂಘ ಪ್ರಮುಖ ಗುರಿಯಾಗಿದ್ದು, ಸಂಘವು ಎಂದಿಗೂ ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ ಸಂರ್ಥನೆ ಮಾಡುವುದಿಲ್ಲಾ.

ಅಂಥ ವ್ಯಕ್ತಿಗಳು ಆರ್‌.ಎಸ್‌.ಎಸ್.‌ ನಿಂದ ಇತರೇ ಸಂಘಟನೆಗಳಿಗೆ ಹೋದವರಾಗಿದ್ದರು ಅವರನ್ನು ಸಂಘ ಎಂದಿಗೂ ಬೆಂಬಲಿಸುವುದಿಲ್ಲಾ. ಅಂಥವರು ಗನವೇಶದಾರಿಗಳಾಗಿ ಸಂಘದ ಕಾರ್ಯಕ್ರಮಗಳಲ್ಲಿ ಬಾಗಿಯಾದರೂ ಕೂಡ ಅವರಿಗೆ ಎಂದು ಸಂಘವು ಬೆಂಬಲಿಸುವುದಿಲ್ಲಾ. ಆರ್‌.ಎಸ್‌.ಎಸ್‌. ನ ಶಾಖೆಗಳಲ್ಲಿ ದೇಶದ ಓಳ್ಳೆಯ ಚಿಂತನೆಗಳು, ಸಹಭಾಳ್ವೆ ಹಾಗೂ ಏಕತೆಯ ಬಗ್ಗೆ ಉತ್ತಮ ತಾಲೀಮನ್ನು ನೀಡಲಾಗುತ್ತದೆ. 

ಆದರೆ ಇಲವರು ಆರ್‌.ಎಸ್‌.ಎಸ್‌ ನಿಂದ ಮತ್ತೊಂದು ಸಂಘಟನೆಯ ಕಡೆಗೆ ಮುಖ ಮಾಡಿದ ಸಮಯದಲ್ಲಿ ಮೂಲ ಸಿದ್ದಾಂತದಿಂದ ತಪ್ಪಿಹೊಗುವ ಸಾಧ್ಯತೆಗಳಿದ್ದು ಅಂಥವರ ಜವಾಬ್ದಾರಿಯನ್ನು ಸ್ವಯಂ ಸೇವಕ ಸಂಘ ಎಂದಿಗು ಬೆಂಬಲಿಸಲು ಸಾಧ್ಯವೇ ಇಲ್ಲಾ.ಇನ್ನು ರಾಜೇಶ್‌ ಪದ್ಮಾರ್‌ ರವರ ಈ ಮಾತುಗಳು ಪರೋಕ್ಷವಾಗಿ ಕರ್ನಾಟಕದ ಬಿ.ಜೆ.ಪಿಯಲ್ಲಿರುವ ಪ್ರಮುಖ ಕೆಲವು ರಾಜಕಾರಣಿಗಳಿಗೆ ಗುರಿಮಾಡಿಕೊಂಡು ಹೇಳಿದಂತಿತ್ತು. 

ಇಷ್ಟೇ ಮಾತ್ರವಲ್ಲದೆ ಪತ್ರಕರ್ತರು ಕೇಳಿತ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ಜಾತಿ ವರ್ಣದ ವ್ಯವಸ್ತೆ ಸಂಘದಲ್ಲಿಲ್ಲಾ ಯಾವಕಾರಣಕ್ಕು ಸಂಘ ಜಾತಿ ವರ್ಣತೆಯನ್ನು ಬೆಂಬಲಿಸುವುದಿಲ್ಲಾ ಈ ಹಿಂದೆ ಗೂಳಿಹಟ್ಟಿ ಸೇಖರ್‌ ರವರ ಆರೋಪಗಳಲ್ಲಿ ಯಾವುದೇ ತಿರುಳಿಲ್ಲಾ ಎಂದು ಹೇಳಿದರು.

 ವರದಿ

ಡಿ.ಪಿ ಅರವಿಂದ್‌ ಶಿವಮೊಗ್ಗ

Comments

Popular posts from this blog

ಮಂಗಳೂರು | ಮೊಸರು ಕುಡಿಕೆ ಉತ್ಸವದಲ್ಲಿ ಯುವತಿ ಜೊತೆ ಯುವಕ ಅಸಭ್ಯ ವರ್ತನೆ: ವ್ಯಾಪಕ ಆಕ್ರೋಶ

ಎಲೆಕ್ಟ್ರಿಕ್‌ ಬೈಕ್‌ ಸಹವಾಸ ಸಾಕಪ್ಪ ಸಾಕು ಎಂದ ನಟ ಶಂಕರ್..!‌

ಚಾಕುವಿನಿಂದ ಹಲ್ಲೆಮಾಡಿದವನಿಗೆ ಜೈಲು ಸಿಕ್ಷೆ ಶಿವಮೊಗ್ಗ ನ್ಯಾಯಾಲಯ ಆದೇಶ