ಬಡವರ ಕೂಗು ಕೇಳದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರ್ಯ..?

 ಶಿವಮೊಗ್ಗ: ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳೆ ಕಳೆದು ಹೋಗಿದೆ ಆದರೆ ಈ ಸ್ವಾತಂತ್ರ್ಯ ಅನ್ನೋದು ಕೇವಲ ಹಣವಂತರಿಗೆ ಹಾಗೂ ದೊಡ್ಡ ಮಟ್ಟದ ವಂಚಕರ ಕೈಯಲ್ಲಿ ಸಿಲುಕಿಕೊಂಡಿದೆಯಾ ಎನ್ನುವ ಅನುಮಾನ ನಮಗೆ ಕಾಡುತ್ತೆ..! ಹೌದು ನಾವು ಇಂದು ಈ ಮಾತನ್ನು ಹೇಳೋಕು ಒಂದು ಕಾರಣವಿದೆ. ಮಾನನೀಯ ಘನವ್ಯತ್ಯ ಸುಪ್ರೀಂಕೋಟ್‌ ಆದೇಶಕ್ಕೂ ಇಲ್ಲಿ ಕವಡೇ ಕಾಡಿನ ಬೆಲೆಯಿಲ್ಲಾ ಎನ್ನುವಹಾಗೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆದುಕೊಳ್ಳುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಅಗ್ರಿಗೋಡ್ಲ್‌,ಸಹಾರ,ಸಮೃದ್ಧ ಜೀವನ್‌,ಗರಿಮಾ,ಹಿಂದುಸ್ಥಾನ ಸಂಸ್ಥೆ ಸೇರಿದಂತೆ ನೂರಾರು ಕಂಪನಿಗಳು ಕೊಟ್ಯಾಂತರ ಜನರಿಗೆ ಕೋಟಿ,ಕೋಟಿ ವಂಚನೆ ಮಾಡಿದ್ದು ನಿಮ್ಮ ಮುಂದಿದೆ. 


ಹೀಗೆ ಜನಸಾಮಾನ್ಯರಿಗೆ ವಂಚನೆ ಮಾಡಿದ ಖಾಸಗಿ ಹಣಕಾಡಿನ ಸಂಸ್ಥೆಗಳ ವಿರುದ್ಧ ದೇಶದ ಅತ್ಯುನ್ಯತ ನ್ಯಾಯಾಲಯವಾಗಿರೋ ಸುಪ್ರೀಂ ಕೋಟ್‌ ಜನರಿಗೆ ಹಣ ಹಿಂತಿರುಗಿಸಿ ಕೊಡುವಂತೆ ಸರ್ಕಾರಗಳಿಗೆ ಹಾಗೂ ಖಾಸಗೀ ಕಂಪನಿಗಳಿಗೆ ಆದೇಶ ನೀಡಿದ್ದರು ಇದುವರೆಗೂ ಯಾವುದೇ ಸರ್ಕಾರಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲಾ. ಇದರಿಂದ ಬೇಸತ್ತಿರುವ ಸಂತ್ರಸ್ತ ಜನರು ಇಂದು ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಛೇರಿಯ ಮುಂಬಾಗ ಪ್ರತಿಭಟನೆಗೆ ಮುಂದಾಗಿದ್ದು, ತಾವು ಪ್ರಾಣಕಳೆದುಕೊಳ್ಳುವವರೆಗೂ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೇಯೇ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.


ಇನ್ನು ಈ ಹೋರಾಟವನ್ನು ವಂಚನೆ ಸಂತ್ರಸ್ತ ಠೇವಣಿದಾರ ಕುಟುಂಬ (ಟಿ.ಪಿ.ಜೆ.ಪಿ) ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಇದು ದೇಶವ್ಯಪಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಹೋರಾಟದಲ್ಲಿ ಖಾಸಗೀ ಹಣಕಾಡು ಸಂಸ್ಥೆಗಳಲ್ಲಿ ಏಜಂಟ್‌ಗಳಾಗಿ ಕೆಲಸಾ ನಿರ್ವಹಿಸಿದ ಪುರುಷರು ಹಾಗೂ ಮಹಿಳೆಯರು ಸೇರಿದಂತೆ ವೃದ್ದರೂ ಪಾಲ್ಡೊಂಡಿದ್ದಾರೆ. ಇಷ್ಟಮಾತ್ರವಲ್ಲದೇ ಸುಮಾರು 10 ವರ್ಷಗಳಿಂದ ನಿರಂತರವಾಗಿ ಇವರು ಹೋರಾಟದಲ್ಲಿ ತೊಡಗಿದ್ದು ಇವರ ಪೈಕಿ ಅದೆಷ್ಟೋ ಜನರು ಈಗಾಗಲೇ ನೊಂದು ಅತ್ಮಹತ್ತೆಗೂ ಶರಣಾಗಿದ್ದಾರೆ, ಇನ್ನು ನಮ್ಮ ಹಣ ನಮಗೆ ಹಿಂತಿರಿಗೆ ಕೊಡದಿದಲ್ಲಿ ನಾವೂ ಕೂಡ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತೆ, ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರು ಕೇವನ ನಮ್ಮನು ಓಟ್‌ ಹಾಕುವವರೆಗೂ ಸಾಂತ್ವನದ ಮಾತುಗಳಾಡುತ್ತಾರೆ ಆ ನಂತರ ನಮ್ಮ ಕಡೆಗೆ ಸರ್ಕಾರಗಳು ತಿರುಗಿಯೂ ನೋಡೊಲ್ಲಾ ಎಂದು ಜನರು ತಮ್ಮ ಅಳಲನ್ನು ಹೇಳಿಕೊಳ್ಳುತ್ತಾರೆ. 


Comments

Popular posts from this blog

ಮಂಗಳೂರು | ಮೊಸರು ಕುಡಿಕೆ ಉತ್ಸವದಲ್ಲಿ ಯುವತಿ ಜೊತೆ ಯುವಕ ಅಸಭ್ಯ ವರ್ತನೆ: ವ್ಯಾಪಕ ಆಕ್ರೋಶ

ಎಲೆಕ್ಟ್ರಿಕ್‌ ಬೈಕ್‌ ಸಹವಾಸ ಸಾಕಪ್ಪ ಸಾಕು ಎಂದ ನಟ ಶಂಕರ್..!‌

ಚಾಕುವಿನಿಂದ ಹಲ್ಲೆಮಾಡಿದವನಿಗೆ ಜೈಲು ಸಿಕ್ಷೆ ಶಿವಮೊಗ್ಗ ನ್ಯಾಯಾಲಯ ಆದೇಶ