Posts

ಚಾಕುವಿನಿಂದ ಹಲ್ಲೆಮಾಡಿದವನಿಗೆ ಜೈಲು ಸಿಕ್ಷೆ ಶಿವಮೊಗ್ಗ ನ್ಯಾಯಾಲಯ ಆದೇಶ

Image
  ಶಿವಮೊಗ್ಗ :   ಹಣ ಕಾಸಿನ ವ್ಯವಹಾರದ ನೆಪದಲ್ಲಿ ವ್ಯಕ್ತಿ ಒಬ್ಬನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ವ್ಯಕ್ತಿಗೆ ನ್ಯಾಯಾಲದ ಶಿಕ್ಷೆ ವಿದಿಸಿದೆ . ಹಯಾತ್ ಸಾಬ್, 31 ವರ್ಷ, ದಾಸರ ಕಾಲೋನಿ ಶಿರಾಳಕೊಪ್ಪ ಟೌನ್ ಮತ್ತು ಜಿಯಾವುಲ್ಲಾ ಖಾನ್, 24   ವರ್ಷ, ಹಳ್ಳೂರು ಕೇರಿ, ಶಿರಾಳಕೊಪ್ಪ ಟೌನ್ ಇಬ್ಬರಿಗೂ ಈ ಹಿಂದಿನಿಂದಲೂ ಮಾವಿನ ತೋಟದ ಗುತ್ತಿಗೆಯ ವಿಚಾರವಾಗಿ ಹಣ ಕಾಸಿನ ವ್ಯವಹಾರವಿದ್ದು, ಹಯಾತ್ ಸಾಬ್ ನು ಜಿಯಾವುಲ್ಲಾ ಖಾನ್ ನಿಗೆ 25,000/- ರೂ ಹಣ ಕೊಡಲು ಬಾಕಿ ಇರುತ್ತದೆ. ಜಿಯಾವುಲ್ಲಾ ಖಾನ್ ನು ಸದರಿ ಹಣವನ್ನು ಹಿಂದಿರುಗಿಸಲು ಕೇಳಿದಾಗ ದಿನಾಂಕಃ 15-05-2022 ರಂದು ಬೆಳಗ್ಗೆ ಹಯಾತ್ ಸಾಬ್ ನು ಜಿಯಾವುಲ್ಲಾಖಾನ್ ಗೆ   ಕರೆ ಮಾಡಿದ .     ಶಿರಾಳಕೊಪ್ಪ ಟೌನ್ ನ ಅಣ್ಣಪ್ಪ ಟಿ ಹೋಟೆಲ್ ಗೆ ಬಾ ಹಣ ಕೊಡುತ್ತೇನೆಂದು ತಿಳಿಸಿದ್ದು, ಜಿಯಾವುಲ್ಲಾಖಾನ್ ನು ಅಲ್ಲಿಗೆ ಹೋದಾಗ ಹಯಾತ್ ಸಾಬ್ ನು ನಿನಗೆ ನಾನು ಯಾವ   ಹಣ ಕೊಡಬೇಕು, ಪದೇ ಪದೇ ಕೇಳುತ್ತೀಯ ಎಂದು ಜಗಳ ತೆಗೆದು, ಕೊಲೆ ಮಾಡುವ ಉದ್ದೇಶದಿಂದ ತನ್ನ ಬಳಿ ಇದ್ದ ಚಾಕುವಿನಿಂದ ಜಿಯಾವುಲ್ಲಾಖಾನ್ ನ ಬೆನ್ನಿಗೆ ಹಲ್ಲೆ ಮಾಡಿರುತ್ತಾನೆಂದು ಗಾಯಾಳು ಜಿಯಾವುಲ್ಲಾ ಖಾನ್ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0100/2022 ಕಲಂ 307, 324 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.         ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ   ಶ್ರೀ ರಮೇಶ್, ಶಿರಾಳಕೊಪ್ಪ

ಸೆಬಿ ಮುಖ್ಯಸ್ಥೆ ವಿರುದ್ಧ ಲೋಕಪಾಲ್‌ಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ದೂರು

Image
 ‌ ಕೋಲ್ಕತ್ತಾ: ಟಿ.ಎಂ.ಸಿ ಸಂಸದ ಮಹುವಾ ಮೊಯಿತ್ರಾ ಅವರು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರ ವಿರುದ್ಧ ಶುಕ್ರವಾರ ಲೋಕಪಾಲ್‌ಗೆ ದೂರು ನೀಡಿದ್ದಾರೆ.  ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ ಸಂಸದೆ, ಪುರಿ-ಬುಚ್ ವಿರುದ್ಧ ಲೋಕಪಾಲ್ ಗೆ ವಿದ್ಯುನ್ಮಾನವಾಗಿ ಮತ್ತು ಭೌತಿಕವಾಗಿ ದೂರನ್ನು ನೀಡಲಾಗಿದೆ. ಲೋಕಪಾಲ್ 30 ದಿನಗಳ ಒಳಗಾಗಿ ಅದನ್ನು ಪ್ರಾಥಮಿಕ ತನಿಖೆಗಾಗಿ ಸಿ.ಬಿ.ಐ ಅಥವಾ ಇಡಿಗೆ ಉಲ್ಲೇಖಿಸಬೇಕು. ನಂತರ ಎಫ್ ಐ ಆರ್ ದಾಖಲಿಸಿ ವಿಚಾರಣೆ ನಡೆಸಬೇಕು.  ಪ್ರತಿಯೊಂದು ಘಟಕಕ್ಕೂ ಸಮನ್ಸ್ ನೀಡಬೇಕು, ಈ ಕುರಿತ ಎಲ್ಲಾ ಲಿಂಕ್ ನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮೂರು ಪುಟಗಳ ಪತ್ರದಲ್ಲಿ, ಮಹುವಾ ಮೊಯಿತ್ರಾ ಅವರು, ಈ ಪ್ರಕರಣ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಕೋಟಿಗಟ್ಟಲೆ ಹೂಡಿಕೆದಾರರ ಹಿತಾಸಕ್ತಿಗಳಿಗೆ ಸಂಬಂಧಿಸಿದೆ.  ಈ ಬಗ್ಗೆ ತನಿಖೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.ಗೌತಮ್ ಅದಾನಿ ಗ್ರೂಪ್‌ನ ವಂಚನೆಯನ್ನು ಕಳೆದ ವರ್ಷ ಬಹಿರಂಗಪಡಿಸಿದ್ದ ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡನ್‌ಬರ್ಗ್‌ 2024ರ ಆಗಸ್ಟ್ 10 ರಂದು ಭಾರತಕ್ಕೆ ಸಂಬಂಧಿಸಿದ ಮತ್ತೊಂದು ಸ್ಪೋಟಕ ವರದಿಯನ್ನು ಬಹಿರಂಗಪಡಿಸಿತ್ತು. ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ(ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅದಾನಿ ಮನಿ ಸೈಫನಿಂಗ್

ಮತ್ತೆ ಹೊತ್ತಿ ಉರಿಯುತ್ತಿರುವ ಮಣಿಪುರ..! ಕಣ್ಣು ಉಚ್ಚಿ ಕೂತಿರುವ ಪ್ರಧಾನಿ ಮೋದಿ: ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀಣೇತ್‌ ಆರೋಪ.

Image
  ನವದೆಹಲಿ:  ಮಣಿಪುರದ ಮತ್ತೆ ಉರಿಯತೊಡಗಿದೆ..! ಕಳೆದ 16 ತಿಂಗಳಿನಿಂದ ಮಣಿಪುರದಲ್ಲಿ ಮೈತಿಸ್‌ ಹಾಗೂ ಕುಕೀಸ್‌ ನಡುವೆ ನಡೆಯುತ್ತಿರುವ ಗಲಬೆಯಗ್ಗೆ ಕೇಂದ್ರ ಸರ್ಕಾರ ಮೌನ ವಹಿಸಿದ್ದು,ದಿನಕಳೆದಂತೆ ಮಣಿಪುರದ ಪರಿಸ್ಥಿತಿ ನಿನ್ನಷ್ಟು ಹದಗೆಗುತ್ತಿದೆ. ಇದುವರೆಗೆ ಸ್ಥಳೀಯ ಕನರು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಿಳಿದ ಕಸೆದುಕೊಂಡಿದ್ದ ಬಂದೂಕುಗಳಿಂದ ಹಲ್ಲೆಗಳನ್ನು ನಡೆಸುತ್ತಿದ್ದು ಆದರೆ ಈಗೆ ಈ ಗಲಬೆಗಳಲ್ಲಿ ಕೆಲವು ಉಗ್ರವಾದಿ ಸಂಘಟೆಗಳು ಸೇರಿಕೊಂಡಿದೆ ಎನ್ನುವ ಅನು ಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಮಣಿಪುರದಲ್ಲಿ ಇತ್ತೀಚಿನ ದಿನಗಳಲ್ಲಿ ಗಲಬೆಯಲ್ಲಿ ಶಾಮೀಲಾಗಿರುವ ಸಂಘಟನೆಗಳು ‌ಅತ್ಯಾದುನಿಕ ಆರ್‌.ಪಿ.ಜಿ ಹಾಗೂ ಡ್ರೋನ್‌ ಗಳಿಂದ ಹಲ್ಲೆಮಾಡಲಾಗುತ್ತಿದ್ದು, ಈ ಗಟನೆಗಳು 10-15 ದಿನಗಳಿಂದ ಅತಿಹೆಚ್ಚಾಗಿ ನಡೆಯುತ್ತಿದೆ. ಇದರ ಪರಿಣಾಮ ಮಣಿಪುರದ ಗಲಬೆಗಳ ನೆಪದಲ್ಲಿ ವಿದೇಶಿ ಶಕ್ತಿಗಳು ಇದರೊಳಗೆ ಶಾಮೀಲಾಗಿರಬಹದು ಇನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ನಿನ್ನೆ ಪತ್ರಿಕಾಗೋಷ್ಟಿಯನ್ನು ನಡೆಸಿ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರೆಯಾಗಿರುವ ಸುಪ್ರಿಯಾ ಶ್ರೀಣೇತ್‌ ಆರೋಪ ಮಾಡಿದ್ದಾರೆ.  ಇದನ್ನೆಲ್ಲಾ ಹತೋಟಿಗೆ ತರಬೇಕಾಗಿರುವ ಕೇಂದ್ರದ ಮೋದಿ ಸರ್ಕಾರ ತನಗೂ ಮಣಿಪುರಕ್ಕೆ ಸಂಭಂದವೇ ಇಲ್ಲಾ ಎನ್ನುವಹಾಗೆ ನಡೆದುಕೊಳ್ಳುತ್ತಿದ್ದು ಇಂಥ ನಿಶ್ಕ್ರೀಯ ಪ್ರಧಾನಿಯನ್ನು ನಮ್ಮ ದೇಶ ಎಂದಿಗೂ ನೋಡಿರಲಿಲ್ಲಾ ಎಂದು ಹೇಳಿದ್ದಾರೆ. ಮಾಧ್ಯಮಗಳು ಮಣ

ರೈತರ ಕೂಗಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ..!

Image
  ಬೆಂಗಳೂರು: ಸಮಾಜವಾಗಿ ಹಿನ್ನೆಲೆ ಬಡವರ ಕಷ್ಟಕ್ಕೆ ಸಧಾಕಾಲ ಬೆನ್ನೆಲುಬಾಗಿ ನಿಲ್ಲುವ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ಇಂದು ವಿಧಾನ ಸೌದದ ತಮ್ಮ ಕಛೇರಿಯಲ್ಲಿ ರೈತ ಮುಖಂಡರನ್ನು ಬೇಟಿಯಾಗಿ ಅವರ ಕಷ್ಟರನ್ನು ಆಲಿಸುವ ಮುಖೇನೆ ಸಮಸ್ಯೆಗಳನ್ನು ಬಗೆಹರಿಸುವ ವರವಸೆಯನ್ನು ನೀಡಿದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ ರೈತ ಸಮುದಾಯದ ಬಹು ಮುಖ್ಯವಾದ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಸರದಿಯಂತೆ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿಗಳು ಅಧಿಕಾರಿಗಳು ಸೂಚಿಸಿದರು.

ಸಿ.ಎಂ ಸಿದ್ದರಾಮಯ್ಯ ಯು.ಎಸ್‌ ಇಂಡಿಯಾ ಪ್ರತಿನಿಧಿಗಳೊಂದಿಗೆ ಚರ್ಚೆ..!

Image
  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಯು.ಎಸ್. ಇಂಡಿಯಾ ಬಿಸಿನೆಸ್ ಕೌನ್ಸಿಲ್ ನ ಪ್ರತಿನಿಧಿಗಳೊಂದಿಗೆ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು. ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ,  ಐ.ಟಿ. ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕ್ ರೂಪ್ ಕೌರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ದಿನ ಭವಿಷ್ಯ/10/09/2024/ ಮಂಗಳವಾರ

Image
  ಮೇಷ ರಾಶಿ. ದೂರ ಪ್ರಯಾಣದಲ್ಲಿ ವಾಹನ ಅಪಘಾತವಾಗುವ ಸೂಚನೆಗಳಿವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಪ್ರಮುಖ ಕಾರ್ಯಕ್ರಮಗಳು ಮುಂದೂಡಲ್ಪಡುತ್ತವೆ ಮತ್ತು  ಬಂಧು ಮಿತ್ರರೊಂದಿಗೆ ವಿವಾದಗಳು ಉಂಟಾಗುತ್ತವೆ. ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲಸದ ಒತ್ತಡ  ಹೆಚ್ಚಾಗುತ್ತದೆ. ವೃಷಭ ರಾಶಿ. ಆದಾಯ ಮತ್ತಷ್ಟು ಹೆಚ್ಚಾಗುತ್ತದೆ. ರಾಜಕೀಯ ವಲಯಗಳಿಂದ ಅಪರೂಪದ ಆಹ್ವಾನಗಳು ಬರುತ್ತವೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಇರುತ್ತದೆ. ಸ್ಥಿರಾಸ್ತಿ ಖರೀದಿಸುತ್ತೀರಿ. ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುತ್ತದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಮಿಥುನ ರಾಶಿ. ಅಮೂಲ್ಯ ವಸ್ತುಗಳನ್ನು ಉಡುಗೊರೆಯಾಗಿ ಸ್ವೀಕರಿಸಲಾಗುತ್ತದೆ. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುತ್ತೀರಿ. ಹೊಸ ವಾಹನ ಯೋಗವಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಅಧಿಕಾರಿಗಳೊಂದಿಗಿನ ಚರ್ಚೆ ಫಲ ನೀಡುತ್ತದೆ. ವ್ಯಾಪಾರಗಳಲ್ಲಿ ಹೊಸ ಹೂಡಿಕೆಗಳು ದೊರೆಯುತ್ತವೆ. ಉದ್ಯೋಗದಲ್ಲಿನ ಅಡೆತಡೆಗಳನ್ನು ನಿವಾರಿಸಲಾಗುತ್ತದೆ. ಕಟಕ ರಾಶಿ. ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಬಂಧು ಮಿತ್ರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಕೆಲಸದಲ್ಲಿ ಸ್ವಲ್ಪ ಅಡೆತಡೆಗಳು ಕಂಡುಬರುತ್ತವೆ. ವ್ಯಾಪಾರಗಳು ನಿರುತ್ಸಾಹಗೊಳಿಸುತ್ತವೆ. ಉದ್ಯ

ಆಹಾರ ಕಲಬೆರಕೆ ತಡೆಗಟ್ಟಲು ದಾಳಿ : ನಿಯಮ ಉಲ್ಲಂಘನೆ ವಿರುದ್ದ ದಂಡ

Image
  ಶಿವಮೊಗ್ಗ, ಸೆ .05   ಆಹಾರ ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಗಳು ಜಂಟಿಯಾಗಿ ಮಂಗಳವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ದಾಳಿ ನಡೆಸಿ ಪಟ್ಟಣ ಸಾಮಗ್ರಿ ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ದಂಡ ವಿಧಿಸಿರುತ್ತಾರೆ.  ಆಹಾರ ಸುರಕ್ಷತೆ ಮತ್ತು ಕಲಬೆರಕೆ ತಡೆಗಟ್ಟಲು ಜಿಲ್ಲಾಧಿಕಾರಿಗಳ ನಿರ್ದೇಶನದ ಅನ್ವಯ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪಟ್ಟಣ ಸಾಮಗ್ರಿ ನಿಯಮ ಉಲ್ಲಂಘನೆ ಪ್ರಕರಣದಡಿ ಕೆಎಸ್‌ಆರ್‌ಟಿಸಿ ನಿಲ್ದಾಣದ ಸ್ವಾತಿ ಎಂಟರ್ಪ್ರೈಸಸ್ ಇವರಿಗೆ ರೂ.10,000/- ಮತ್ತು ಹಾಟ್‌ಸ್ಪಾಟ್ ಕೆಫೆ ಹಾಗೂ ರೈಲ್ವೆ ನಿಲ್ದಾಣದಲ್ಲಿನ ಕಾಫಿ ಶಾಪ್ ಇವರಿಗೆ ತಲಾ ರೂ.5000/- ಗಳ ದಂಡವನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ವಿಧಿಸಿರುತ್ತಾರೆ.   ಮತ್ತು ಗೃಹಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದ ಮೂರು ಹೋಟೆಲ್ ಗಳಿಂದ ಒಟ್ಟು ಏಳು ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿರುತ್ತಾರೆ.  ತಯಾರಿ ದಿನಾಂಕ ಮತ್ತು ಎಕ್ಸ್ಪೈರಿ ದಿನಾಂಕ ಇಲ್ಲದ ಆಹಾರ ಪದಾರ್ಥಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು ದಿನಾಂಕ ನಮೂದಾಗಿರದ ಆಹಾರ ಪ